ಚಿಕಿತ್ಸಾ ಸೌಲಭ್ಯಗಳು:
ಕಿಡ್ನಿ ಮತ್ತು ಮೂತ್ರಕೋಶದಲ್ಲಿ ಕಲ್ಲು
ಶುಕ್ಲ ಗ್ರಂಥಿಯ (ಪಾಸ್ಪೇಟ್) ಬೆಳವಣಿಗೆ
ಕಿಡ್ನಿ ಮತ್ತು ಮೂತ್ರಕೋಶದಲ್ಲಿ ಕ್ಯಾನ್ಸರ್
ಪುರುಷರಲ್ಲಿ ಮೂತ್ರ ವಿಸರ್ಜನೆ ಅಡಚಣೆ
ಸ್ತ್ರೀಯರಲ್ಲಿ ಮತ್ತು ಮಕ್ಕಳಲ್ಲಿ ಮೂತ್ರ ವಿಸರ್ಜನೆ ತೊಂದರೆ
ಪುರುಷರ ಬಂಜೆತನ ಮತ್ತು ಲೈಂಗಿಕ ಸಮಸ್ಯೆಗಳು
ಯಾವುದೇ ಪ್ರಶ್ನೆಗಳು ಅಥವಾ ಮಾಹಿತಿ
ಯಾವುದೇ ಪ್ರಶ್ನೆಗಳಿದ್ದರೆ ನನಗೆ ವಾಟ್ಸಾಪ್ ಮಾಡಿ....
ಡಾ. ಸದಾನಂದ ಪೂಜಾರಿಯವರು ಮುಖ ಪರಿಚಯ
ಡಾ. ಸದಾನಂದ ಪೂಜಾರಿಯವರು ಬೆಳ್ತಂಗಡಿ ತಾಲೂಕಿನ ತೆಂಕ ಕಾರಂದೂರು ಗ್ರಾಮದ ಅಂಗಡಿ ಬೆಟ್ಟು ಶ್ರೀಯುತ. ಮಾಯಿಲಪ್ಪ ಪೂಜಾರಿ ಹಾಗು ಶ್ರೀಮತಿ ರೇವತಿ ದಂಪತಿಯವರು ಪ್ರೀತಿಯ ಸುಪುತ್ರನಾಗಿ ಜನಿಸಿದರು. ಪ್ರಾಥಮಿಕ ಹಾಗು ಪ್ರೌಢಶಾಲೆ ಬೆಳ್ತಂಗಡಿಯಲ್ಲಿ ಮತ್ತು ಪಿ.ಯು.ಸಿ ಶಿಕ್ಷಣವನ್ನು ಎಸ್.ಡಿ.ಯಂ. ಕಾಲೇಜು ಉಜಿರೆಯಲ್ಲಿ ಪೂರೈಸಿ ಮಂಗಳೂರಿನ ಕೆ.ಎಂ.ಸಿ. ಯಲ್ಲಿ ಎಂ.ಬಿ.ಬಿ.ಎಸ್ ಮತ್ತು ಜನರಲ್ ಸರ್ಜರಿಯಲ್ಲಿ ಎಂ.ಎಸ್. ಪದವಿಯನ್ನು ಬೆಂಗಳೂರು ಮೆಡಿಕಲ್ ಕಾಲೇಜು ನಲ್ಲಿ ಪಡೆದಿದ್ದಾರೆ.
ಸೂಪರ್ ಸ್ಪೆಷಲಿಸ್ಟ್ mch urologyಯನ್ನು ಬೆಂಗಳೂರು ಮೆಡಿಕಲ್ ಕಾಲೇಜುನಲ್ಲಿ ಪಡೆದಿರುತ್ತಾರೆ.
ಡಾ. ಸದಾನಂದ ಪೂಜಾರಿಯವರು ತನ್ನ ಕರ್ತವ್ಯವನ್ನು ಪ್ರಥಮವಾಗಿ ಸಾರ್ವಜನಿಕ ಸರಕಾರಿ ಆಸ್ಪತ್ರೆ ಉಳ್ಳಾಲದಲ್ಲಿ ಪ್ರಾರಂಭಿಸಿ ಈಗಾಗಲೇ ಸುಮಾರು ೫೦೦೦ ಕ್ಕಿಂತಲೂ ಹೆಚ್ಚು ಶಸ್ತ್ರ ಚಿಕಿತ್ಸೆಗಳನ್ನು ನಡೆಸಿರುತ್ತಾರೆ. ಇವರ ಸೇವೆಯ ಜೊತೆ ಜೆ.ಸಿ.ಐ ಯಿಂದ ಅತ್ಯುತ್ತಮ ಯಂಗ್ ಇಂಡಿಯನ್ ಅವಾರ್ಡ್. ಕರ್ನಾಟಕ ಸೇವಾ ಪ್ರತಿಷ್ಠಾನದಿಂದ ಸಾಮಾಜಿಕ ಸೇವಾ ಪುರಸ್ಕಾರ. ಬೆಸ್ಟ್ ಸರ್ಜನ್ ಅವಾರ್ಡ್ ಹಾಗೂ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಲಾಗಿದೆ. ಜನಸ್ನೇಹ ಸಮಾಜಮುಖಿ ಕೆಲಸಗಳಿಗೆ ಹೆಸರಾದ ಡಾಕ್ಟರ್. ಎಸ್. ಪೂಜಾರಿಯವರು ಕಳೆದ ಹಲವು ವರುಷಗಳಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ಧಾರೆ. ಪ್ರತಿ ದಿನ ಸುಮಾರು ೬೦ ಮಂದಿಗೆ ಡಯಾಲಿಸಿಸ್ ಮಾಡುವ ಮೂಲಕ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದು ಕೀರ್ತಿಗೆ ವೆನ್ಲಾಕ್ ಆಸ್ಪತ್ರೆ ಪಾತ್ರವಾಗಿದೆ. ಇದಕೆಲ್ಲಾ ಕಾರಣ ಮೂತ್ರ ರೋಗ ತಜ್ಞ ನಮ್ಮ ಪರಿವಾರದ ಡಾಕ್ಟರ್ ಎಸ್. ಪೂಜಾರಿಯವರ ಅವಿರತ ಶ್ರಮದ ಸೇವೆಯ ಪ್ರಯತ್ನದ ಪ್ರತಿಫಲವಾಗಿದೆ. ಇವರು ವೆನ್ಲಾಕ್ ಆಸ್ಪತ್ರೆಯಲ್ಲಿ ಊರೊಲೊಜಿ ಡಿಪಾರ್ಟ್ಮೆಂಟ್ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಜ್ಯೋತಿ ಡಯೋಗ್ನಾಸ್ಟಿಕ್ , ಎಸ್.ಸಿ.ಎಸ್, ಜಯಶ್ರೀ, ಅಥೆನಾ , ಪದ್ಮಾವತಿ ಮೊದಲಾದ ಹೆಸರಾಂತ ಆಸ್ಪತ್ರೆಗಳಲ್ಲಿ ಸಂದರ್ಶಕ ಡಾಕ್ಟರಾಗಿ ನಮ್ಮ ಸೇವೆಯನ್ನು ನೀಡುತ್ತಿದ್ದಾರೆ.
ಇವರ ಈ ಸೇವೆಯನ್ನು ಗುರುತಿಸಿ ಭಾರತೀಯ ವೈದ್ಯಕೀಯ ಸಂಘ (Indian medical Association) ದಕ್ಷಿಣ ಕನ್ನಡ ಜಿಲ್ಲಾ ವಿಭಾಗ ಇದರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ.
Mangaluru: Shot in the arm for intrepid Covid warrior surgeon
19-Jan-2021 — Dr Sadanand Poojary, a Consultant Urologist and Andrologist, performed surgery on ten Covid positive patients at Government Wenlock Hospital ...
Article from The Times Of India
Read
© Hash Infotech. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸಗೊಳಿಸಿದವರು Hash Infotech





